ಪುಟ 1
ಅರ್ಜುನ್ ಸುಂದರಬನದಲ್ಲಿ ದೋಣಿಯಲ್ಲಿ ಹೋಗುತ್ತಾನೆ. ಅಲ್ಲಿ ಮರಗಳು ನೀರಿನಲ್ಲಿ ಉದ್ದುದ್ದ ಬೇರುಗಳ ಮೇಲೆ ನಿಂತಿವೆ.
ಪುಟ 2
ದೋಣಿ ನಡೆಸುವ ಮಾವ ಕೆಸರಿನ ಕಡೆ ಕೈ ತೋರಿಸುತ್ತಾರೆ. ದೊಡ್ಡ ಪಂಜದ ಗುರುತು! “ಇಲ್ಲಿ ಹುಲಿ ನಡೆದು ಹೋಗಿದೆ,” ಎಂದು ಮೆಲ್ಲಗೆ ಹೇಳುತ್ತಾರೆ.
ಪುಟ 3
ಅರ್ಜುನ್ ಉಸಿರು ಬಿಗಿ ಹಿಡಿಯುತ್ತಾನೆ. ಕಾಡಿನಲ್ಲಿ ಒಂದು ಸದ್ದೂ ಇಲ್ಲ.
ಪುಟ 4
ಒಂದು ಏಡಿ ಅಡ್ಡಡ್ಡ ಓಡುತ್ತದೆ. ಒಂದು ಮಿಂಚುಳ್ಳಿ ನೀರಿಗೆ ಧುಮುಕುತ್ತದೆ. ಡುಬುಕ್!
ಪುಟ 5
ಆಗ, ತುಂಬಾ ದೂರದಲ್ಲಿ, ಎಲೆಗಳ ಮಧ್ಯದಿಂದ ಎರಡು ಹಳದಿ ಕಣ್ಣುಗಳು ಇಣುಕುತ್ತವೆ.
ಪುಟ 6
ಹುಲಿ ತಿರುಗಿ ಮರಗಳ ನಡುವೆ ನಡೆದು ಹೋಗುತ್ತದೆ. ಅರ್ಜುನ್ ಇದನ್ನು ಎಂದಿಗೂ ಮರೆಯುವುದಿಲ್ಲ.